ನಿಮ್ಮ ಟ್ರ್ಯಾಕ್ಟರ್ ಅನ್ನು ಟ್ರ್ಯಾಕ್ ಮಾಡಿ
ನಮ್ಮ ಮುಂದಿನ ಪೀಳಿಗೆಯ
AI-ಚಾಲಿತ ಆಪ್ ಜೊತೆಗೆ ಸಂಪರ್ಕದಲ್ಲಿರಿ
ಸ್ಥೂಲನೋಟ
ಡಿಜಿಸೆನ್ಸ್ (Digisense) 4G ಎಂಬುದು ಮುಂದಿನ ಪೀಳಿಕೆಯ AI (ಕೃತಕ ಬುದ್ಧಿಮತ್ತೆ) ಚಾಲಿತ ಮುಕ್ತವಾದ ಆರ್ಕಿಟೆಕ್ಚರ್ ಸಂಪರ್ಕಿತ ಪರಿಹಾರವಾಗಿದೆ. ಡಿಜಿಸೆನ್ಸ್ 4G ಮಹೀಂದ್ರಾ ಡಿಜಿಸೆನ್ಸ್ ವೇದಿಕೆಯ ಯಶಸ್ಸಿನ ಮೇಲೆ ಸುಧಾರಿಸುತ್ತದೆ. ಡೇಟಾ ಚಾಲಿತವಾಗಿರುವ ಈ ಆಪ್ ರೈತರಿಗೆ ತಮ್ಮ ಟ್ರ್ಯಾಕ್ಟರ್ಗಳನ್ನು ಟ್ರ್ಯಾಕ್ ಮಾಡಲು ಹಾಗೂ ತಮ್ಮ ಕೃಷಿ ಚಟುವಟಿಕೆಗಳನ್ನು ದೂರಸ್ಥವಾಗಿ ನಿಯಂತ್ರಿಸಲು ಸಹಾಯ ಮಾಡುತ್ತವೆ. ತಮ್ಮ ಕೃಷಿ ಕಾರ್ಯಾಚರಣೆಗಳ ಡೇಟಾದ ಮೂಲಕ ರೈತರನ್ನು ಸಶಕ್ತೀಕರಿಸುವ ಗುರಿಯನ್ನು ಇದು ಹೊಂದಿದ್ದು, ಈ ಮೂಲಕ ಅವರು ಹೆಚ್ಚು ಲಾಭದಾಯಕವಾದ ನಿರ್ಧಾರಗಳನ್ನು ಕೈಗೊಳ್ಳಲು ಸಾಧ್ಯವಾಗುತ್ತದೆ. ಈ ಪರಿಹಾರಗಳು 4G ಯೊಂದಿಗೆ ಮತ್ತು ಸ್ಮಾರ್ಟ್ಫೋನ್ಗಳಿಂದ ಆರಂಭಿಸಿ ಪ್ರಮಾಣಿತ ಲ್ಯಾಪ್ಟಾಪ್ಗಳವರೆಗೆ ಹಲವು ಸಾಧನಗಳೊಂದಿಗೆ ಹೊಂದಿಕೊಳ್ಳುತ್ತವೆ. ಈಗ, ರೈತರ ಕಣ್ಣಿನಿಂದ ಯಾವುದೂ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಈಗ ಅವರೇ ಮೂರನೇ ಕಣ್ಣನ್ನು ಹೊಂದಿರುತ್ತಾರೆ, ಅದೂ ತಮ್ಮ ಅಂಗೈಯಲ್ಲಿ.
ಲೊಕೇಶನ್ ಸೇವೆಗಳು ಮತ್ತು ಭದ್ರತೆ
-
ಮ್ಯಾಪ್ ವ್ಯೂ - ಗೂಗಲ್ ನೀಡಿರುವ ಮ್ಯಾಪ್ಗಳನ್ನು ಬಳಸಿ, ನೀವು ನಿಮ್ಮ ಟ್ರ್ಯಾಕ್ಟರ್ನ ಲೈವ್/ಹಾಲಿ ಲೊಕೇಶನ್ ಅನ್ನು ನೋಡಬಹುದು ಮತ್ತು ಸ್ಯಾಟಿಲೈಟ್ ಅಥವಾ ರಸ್ತೆ ಮ್ಯಾಪ್ ನೋಟವನ್ನು ಆಯ್ಕೆ ಮಾಡಬಹುದು.
-
ಲೊಕೇಟ್ ಟ್ರ್ಯಾಕ್ಟರ್ (ಟ್ರ್ಯಾಕ್ಟರ್ ಇರುವ ಸ್ಥಳ ಗುರುತಿಸಿ) - ಈ ವೈಶಿಷ್ಟ್ಯವು ನಿಮ್ಮ ಟ್ರ್ಯಾಕ್ಟರ್ ಅನ್ನು ಮ್ಯಾಪ್ನಲ್ಲಿ ಒಂದೇ ಸ್ಪರ್ಶ ಅಥವಾ ಕ್ಲಿಕ್ ಮೂಲಕ ನಿಮ್ಮ ಟ್ರ್ಯಾಕ್ಟರ್ ಇರುವ ಜಾಗವನ್ನು ಗುರುತಿಸಲು ಅವಕಾಶ ನೀಡುತ್ತದೆ. ಇದು ಮ್ಯಾಪ್ನಲ್ಲಿ ನಿಮ್ಮ ಟ್ರ್ಯಾಕ್ಟರ್ ಅನ್ನು ರಿ-ಸೆಂಟರ್ ಮಾಡಲೂ ಸಹಾಯ ಮಾಡುತ್ತದೆ.
-
ಲೊಕೇಟ್ ಮಿ (ನಾನಿರುವ ಸ್ಥಳವನ್ನು ಗುರುತಿಸಿ) - ಈ ಸೌಲಭ್ಯದೊಂದಿಗೆ ನೀವು ಹಾಲಿ ಇರುವ ಸ್ಥಳ ಮತ್ತು ನಿಮ್ಮ ಟ್ರ್ಯಾಕ್ಟರ್ ನಡುವಿನ ಅಂತರವನ್ನು ನೀವು ಪರೀಕ್ಷಿಸಬಹುದು.
-
ವೆಹಿಕಲ್ ಸ್ಟೇಟಸ್ (ವಾಹನದ ಸ್ಥಿತಿ) - ವೈಫೈ (WiFi) ಐಕಾನ್ ಜೊತೆಗೆ ಟ್ರ್ಯಾಕ್ಟರ್ ಐಡ್ಲಿಂಗ್ನ ಅನಿಮೇಟೆಡ್ ನೋಟವು ವಾಹನದ ಸ್ಥಿತಿಯನ್ನು ಸೂಚಿಸುತ್ತದೆ. ಆನ್ ಆಗಿರುವಾಗ - ಈ ಸಂಕೇತವು ಹಸಿರು ಬಣ್ಣಕ್ಕೆ ತಿರುಗುತ್ತದೆ ಮತ್ತು ಹೊಗೆಯ ಅನಿಮೇಷನ್ ಹೊಂದಿರುತ್ತದೆ. ಆಫ್ ಆಗಿರುವಾಗ - ಐಕಾನ್ ಕೆಂಪು ಬಣ್ಣವನ್ನು ತಾಳುತ್ತದೆ.
- ವಾಹನದ ಸ್ಥಿತಿ: "ಮೂವಿಂಗ್"/"ಐಡಲ್" - (ಚಲಿಸುತ್ತಿದೆ/ಐಡಲ್ ಆಗಿದೆ)- ಹಸಿರು ಬಣ್ಣದ WIFI ಚಿಹ್ನೆ & ಹಸಿರು ಬಣ್ಣದ ಎಂಜಿನ್ ಅವರ್ಸ್ ಬಟನ್
- ವಾಹನದ ಸ್ಥಿತಿ: "ಸ್ಟಾಪ್ಡ್” - (ನಿಂತಿದೆ) - ಕೆಂಪು ಬಣ್ಣದ WIFI ಚಿಹ್ನೆ & ಕೆಂಪು ಬಣ್ಣದ ಎಂಜಿನ್ ಅವರ್ ಬಟನ್
-
ಜಿಯೋಫೆನ್ಸ್ - ಗ್ರಾಹಕರ ಅಗತ್ಯಾನುಸಾರ ಗ್ರಾಹಕೀಕೃತ ಆಕೃತಿಗಳಲ್ಲಿ ಜಿಯೋಫೆನ್ಸ್ ಅನ್ನು ರಚಿಸಬಹುದು. ಮಾಪನಾಂಕ ನಿರ್ಣಯಿಸಿದ ಪ್ರದೇಶದಲ್ಲಿ ವಾಹನವು ಪ್ರವೇಶಿಸಿದರೆ ಅಥವಾ ಅಲ್ಲಿಂದ ನಿರ್ಗಮಿಸಿದರೆ ಇದು ನಿಮ್ಮನ್ನು ಎಚ್ಚರಿಸುತ್ತದೆ.
-
ನೆಟ್ವರ್ಕ್ ಸ್ಟೇಟಸ್ (ನೆಟ್ವರ್ಕ್ ಸ್ಥಿತಿ) - ಇದನ್ನು ಎರಡು ವರ್ಗಗಳಲ್ಲಿ ವಿಂಗಡಿಸಲಾಗಿದೆ - ಟ್ರ್ಯಾಕ್ಟರ್ ಆಫ್ಲೈನ್ ಮತ್ತು ಬಳಕೆದಾರ ಆಫ್ಲೈನ್
- ಟ್ರ್ಯಾಕ್ಟರ್ ನೆಟ್ವರ್ಕ್ ಪ್ರದೇಶದಿಂದ ಹೊರಗಿದ್ದಾಗ ಟ್ರ್ಯಾಕ್ಟರ್ ಆಫ್ಲೈನ್ ಎಂದು ಗೋಚರಿಸುತ್ತದೆ.
- ಗ್ರಾಹಕರ ಮೊಬೈಲ್ ಡೇಟಾವನ್ನು ಬಳಸುವುದನ್ನು ನಿಲ್ಲಿಸಿದರೆ ಬಳಕೆದಾರ ಆಫ್ಲೈನ್ ಎಂದು ಗೋಚರಿಸುತ್ತದೆ.
ಕೃಷಿ ಕಾರ್ಯಾಚರಣೆಗಳು ಮತ್ತು ಉತ್ಪಾದಕತೆ
-
ಹವಾಮಾನ - ನಿಮ್ಮ ಟ್ರ್ಯಾಕ್ಟರ್ ಇರುವ ಸ್ಥಳವನ್ನು ಆಧರಿಸಿ 3 ದಿನಗಳವರೆಗೆ ಹವಾಮಾನದ ಮಾಹಿತಿಯನ್ನು ಪಡೆಯಿರಿ.
-
ಡೀಸೆಲ್ ಬಳಕೆ - ಈ ವೈಶಿಷ್ಟ್ಯವು ಟ್ಯಾಂಕ್ನಲ್ಲಿರುವ ಡೀಸೆಲ್ ಮಟ್ಟ, ಹತ್ತಿರದ ಡೀಸೆಲ್ ಬಂಕ್ಗೆ ಇರುವ ದೂರವನ್ನು ಸೂಚಿಸುತ್ತದೆ ಮತ್ತು ಇದು ಗ್ರಾಹಕರ ಪ್ರಸ್ತುತ ಸ್ಥಳ ಮತ್ತು ಟ್ರ್ಯಾಕ್ಟರ್ ನಡುವಿನ ಅಂತರವನ್ನೂ ತೋರಿಸುತ್ತದೆ.
-
ಟ್ರ್ಯಾಕ್ಟರ್ ಬಳಕೆ - ಇಲ್ಲಿ ತೋರಿಸಿರುವ ಡೇಟಾವನ್ನು ಎರಡು ರೀತಿಯಲ್ಲಿ ವರ್ಗೀಕರಿಸಲಾಗಿದೆ - ಫೀಲ್ಡ್ ವರ್ಕ್ ಮತ್ತು ಆನ್ ರೋಡ್. ಏರಿಯಾ ಕ್ಯಾಲ್ಕುಲೇಟರ್ ಬಳಸಿ ಕ್ಷೇತ್ರ ಕಾರ್ಯವನ್ನು ಅಳೆಯಲಾಗುತ್ತದೆ, ಅದೇ ರೀತಿ ಟ್ರಿಪ್ ಕ್ಯಾಲ್ಕುಲೇಟರ್ ಬಳಸಿ ಸಾಗಾಟ/ಆನ್ ರೋಡ್ ಅನ್ನು ಅಳೆಯಲಾಗುತ್ತದೆ. ಪ್ರದೇಶ ವ್ಯಾಪ್ತಿ ಮತ್ತು ಟ್ರಿಪ್ ಕ್ಯಾಲ್ಕುಲೇಟರ್ ಎರಡಕ್ಕೂ – ಗರಿಷ್ಠ 3 ತಿಂಗಳ ಡೇಟಾ ಲಭ್ಯವಿರುತ್ತದೆ. ಇದನ್ನು ಇನ್ನೂ ಚೆನ್ನಾಗಿ ಅರ್ಥಮಾಡಿಕೊಳ್ಳೋಣ:
- ಏರಿಯಾ ಕ್ಯಾಲ್ಕುಲೇಟರ್: ಎಕರೆಗಳಲ್ಲಿ ಮಾಡಿದ ಕ್ಷೇತ್ರ ಕಾರ್ಯಗಳ ಕುರಿತು ಗ್ರಾಹಕೀಕೃತ ವರದಿಗಳನ್ನು ಬಳಕೆದಾರರು ಕಾಣಬಹುದು. ಬಳಕೆದಾರರು ನಿರ್ದಿಷ್ಟ ಹೊಲಗಳನ್ನು ಆಯ್ಕೆ ಮಾಡಬಹುದು. ಮಾಡಿದ ಕೆಲಸದ ಅವಧಿ ಮತ್ತು ಸರಾಸರಿ RPM ಅನ್ನೂ ಇಲ್ಲಿ ಪ್ರದರ್ಶಿಸಲಾಗುತ್ತದೆ.
- ಟ್ರಿಪ್ ಕ್ಯಾಲ್ಕುಲೇಟರ್: ರಸ್ತೆ ಕೆಲಸವನ್ನು ಕಿಲೋಮೀಟರ್ಗಳಲ್ಲಿ ಲೆಕ್ಕ ಹಾಕಲಾಗುತ್ತದೆ. ಗ್ರಾಹಕೀಕೃತ ವರದಿಗಳನ್ನು ಪಡೆಯಲು ಬಳಕೆದಾರರು ದಿನ ಅಥವಾ ತಿಂಗಳ ಅವಧಿಯನ್ನು ಆಯ್ಕೆ ಮಾಡಬಹುದು. ಟ್ರಿಪ್ ಡೇಟಾವನ್ನು ನಿರ್ದಿಷ್ಟ ಟ್ರಿಪ್ಗೆ ಅನುಗುಣವಾಗಿ ವಿಂಗಡಿಸಲಾಗಿದೆ.
ವಾಹನದ ಆರೋಗ್ಯ ಮತ್ತು ನಿರ್ವಹಣೆ
-
ಅಲರ್ಟ್ (ಎಚ್ಚರಿಕೆ) ಅಧಿಸೂಚನೆ - ಇತರ ಅಲರ್ಟ್ಗಳಿಗಾಗಿ ಬೆಲ್ ಐಕಾನ್ನಿಂದ ಸೂಚಿಸಿದ ಅಧಿಸೂಚನೆಗಳನ್ನು ಮೊಬೈಲ್ ಆ್ಯಪ್ನಲ್ಲಿ ಪುಶ್ ಅಧಿಸೂಚನೆಗಳಾಗಿ ಮತ್ತು ನಿರ್ಣಾಯಕ ಅಲರ್ಟ್ಗಳಿಗಾಗಿ SMS ಗಳನ್ನು ಸ್ವೀಕರಿಸಲಾಗುತ್ತದೆ. ನಿರ್ಣಾಯಕ ಅಲರ್ಟ್ಗಳಲ್ಲಿ ಎಂಜಿನ್ನ ಅಧಿಕ ತಾಪಮಾನ ಮತ್ತು ಆಯಿಲ್ ಒತ್ತಡ ಕಡಿಮೆಯಾಗುವುದು ಸೇರಿವೆ. ಹೆಚ್ಚಿನ ಎಂಜಿನ್ MRP ಎಚ್ಚರಿಕೆ, ಕಡಿಮೆ ಇಂಧನ, ಜಿಯೋಫೆನ್ಸ್ ಎಚ್ಚರಿಕೆ, ಕೀ ತೆಗೆಯುವಿಕೆ, ಸರ್ವಿಸ್ (ಸೇವಾ) ಜ್ಞಾಪನೆ ಅಧಿಸೂಚನೆ ಮತ್ತು ಬ್ಯಾಟರಿ ಚಾರ್ಜ್ ಆಗುತ್ತಿಲ್ಲವೆಂಬ ಎಚ್ಚರಿಕೆಗಳು ಇತರ ಎಚ್ಚರಿಕೆಗಳ ಸಾಲಿಗೆ ಸೇರುತ್ತವೆ.
-
ಎಂಜಿನ್ ಅವರ್ಸ್ - ಪ್ರಸ್ತುತ ಎಂಜಿನ್ ಗಂಟೆಗಳು, ಸಂಚಿತ ಎಂಜಿನ್ ಗಂಟೆಗಳು ಮತ್ತು ಮುಂದಿನ ಸರ್ವೀಸ್ (ಸೇವೆ)ಗೆ ಎಷ್ಟು ಗಂಟೆಗಳು ಬಾಕಿ ಇವೆ ಎಂಬುದನ್ನು ತಿಳಿದುಕೊಳ್ಳಿ. ಈವರೆಗಿನ ಋತುಗಳಲ್ಲಿ ಟ್ರ್ಯಾಕ್ಟರ್ ಅನ್ನು ಹೇಗೆ ಬಳಸಲಾಗಿದೆ ಎಂಬುದನ್ನು ಅರ್ಥಮಾಡಿಕೊಳ್ಳಲು ಈ ಡೇಟಾವು ಸಹಾಯ ಮಾಡುತ್ತದೆ.
ವೈಯಕ್ತೀಕರಣ ಮತ್ತು ಸಂರಚನೆ
-
ವಾಹನ ಆಯ್ಕೆ - ಬಳಕೆದಾರರು ತಾವು ಪಟ್ಟಿ ಮಾಡಿದ ಹಲವಾರು ಟ್ರ್ಯಾಕ್ಟರ್ಗಳಲ್ಲಿ ಒಂದನ್ನು ಆಯ್ಕೆ ಮಾಡಬಹುದು. ಆಯ್ಕೆಮಾಡಿದ ವಾಹನದ ಹೆಸರನ್ನು ಪರದೆಯ ಮೇಲೆ ಪ್ರದರ್ಶಿಸಲಾಗುತ್ತದೆ. ಈ ವೈಶಿಷ್ಟ್ಯವು ರೈತರಿಗೆ ಬಳಕೆಗೆ ಲಭ್ಯವಿರುವ ಟ್ರ್ಯಾಕ್ಟರ್ಗಳ ಸಂಖ್ಯೆ ಮತ್ತು ಅವುಗಳ ಬಳಕೆಯ ಸ್ಥಿತಿಯನ್ನು ತಿಳಿಯಲು ಸಹಾಯ ಮಾಡುತ್ತದೆ.
-
ಹ್ಯಾಂಬರ್ಗರ್ ಮೆನು - ಈ ವಿಭಾಗವು ಹಲವಾರು ವೈಯಕ್ತೀಕರಣ ಕಾರ್ಯಗಳನ್ನು ನಿರ್ವಹಿಸಲು ನಿಮಗೆ ಅನುವು ಮಾಡಿಕೊಡುತ್ತದೆ, ಇವುಗಳಲ್ಲಿ ಪ್ರಮುಖವಾಗಿ -
- ಮೈ ಟ್ರ್ಯಾಕ್ಟರ್ - ನಿಮ್ಮ ಟ್ರ್ಯಾಕ್ಟರ್ ಹೆಸರನ್ನು ವೈಯಕ್ತೀಕರಿಸಲು ನಿಮಗೆ ಸಹಾಯ ಮಾಡುವ ವೈಶಿಷ್ಟ್ಯವಾಗಿದೆ
- ಹೆಸರು ಮತ್ತು ಸಂಪರ್ಕ
- ಎಚ್ಚರಿಕೆಗಳ ಸಂರಚನೆ
- ಕಾರ್ಯಗಳಿಗಾಗಿ ಜ್ಞಾಪನಗಳ ರಚನೆ
- ಭಾಷೆಯನ್ನು ಬದಲಾಯಿಸಿ
- PIN ಸಂಖ್ಯೆಯನ್ನು ಬದಲಾಯಿಸಿ
-
ನನ್ನನ್ನು ಕೇಳಿ - ಈ ವೈಶಿಷ್ಟ್ಯವು ಪೂರ್ವನಿರ್ಧರಿತ ಪ್ರಶ್ನೆಗಳ ಗುಂಪನ್ನು ಹೊಂದಿದೆ. ಈ ಪ್ರಶ್ನೆಗಳಿಗೆ ಟ್ರ್ಯಾಕ್ಟರ್ ಇರುವ ಸ್ಥಳ, ಡೀಸೆಲ್ ಮಟ್ಟ, ನಿರ್ಣಾಯಕ ಅಲರ್ಟ್ಗಳ ಸ್ಥಿತಿ, ಟ್ರ್ಯಾಕ್ಟರ್ ಬಳಕೆ, ಸ್ಕ್ರೀನ್ ಬಳಸಲು ಆರಾಮದಾಯಕವಲ್ಲದ ಬಳಕೆದಾರರಿಗೆ ಸರ್ವೀಸ್ (ಸೇವಾ) ಸ್ಥಿತಿಯ ಬಗ್ಗೆ ಮಾಹಿತಿಯೊಂದಿಗೆ ಆ್ಯಪ್ ಪ್ರತಿಕ್ರಿಯಿಸುತ್ತದೆ. ಉತ್ತಮ ನೆಟ್ ವರ್ಕ್ ಕವರೇಜ್ ಇದೆ ಎಂದು ಖಚಿತಪಡಿಸಿಕೊಳ್ಳಿ, ಏಕೆಂದರೆ ಈ ವೈಶಿಷ್ಟ್ಯವು ಅಂತಹ ಪರಿಸ್ಥಿತಿಗಳಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ.